ಏಪ್ರಿಲ್ 2020ರ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಮುಂದೂಡಿರುವ ಬಗ್ಗೆ 2020-21ನೇ ಸಾಲಿನ ಆದರ್ಶ ವಿದ್ಯಾಲಯಗಳ ಪ್ರವೇಶ ಪರೀಕ್ಷೆಯ ಪರಿಷ್ಕೃತ ಕೀ ಉತ್ತರಗಳು 7ನೇ ತರಗತಿ ಸಾಮಾನ್ಯ ಮೌಲ್ಯಾಂಕನದ ಪರೀಕ್ಷೆಯನ್ನು ಮುಂದೂಡಿರುವ ಬಗ್ಗೆ. ಮಾರ್ಚ್/ಏಪ್ರಿಲ್-2020ರ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಕ್ಕೆ ಮಧುಮೇಹ-1 ರಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಇನ್ಸುಲಿನ್ ಸಲಕರಣೆ ತೆಗೆದುಕೊಂಡು ಹೋಗುವ ಹಾಗೂ ಸಂಜ್ಙಾಭಾಷೆ ಅರಿತ ಶಿಕ್ಷಕರ ನಿಯೋಜನೆ ಬಗ್ಗೆ 7ನೇ ತರಗತಿ “ಸಾಮಾನ್ಯ ಮೌಲ್ಯಾಂಕನ”ದ ಮಾದರಿ ಒ.ಎಂ.ಆರ್. ಫೆಬ್ರವರಿ-2020 ರ ಮಾಹೆಯ ಗಣಕಯಂತ್ರ ಶಿಕ್ಷಣ ಪರೀಕ್ಷೆಯ ಫಲಿತಾಂಶ ಫೆಬ್ರವರಿ-2020 ರ ಮಾಹೆಯ ಗಣಕಯಂತ್ರ ಶಿಕ್ಷಣ ಪರೀಕ್ಷೆಯ ಫಲಿತಾಂಶಕ್ಕೆ ಸಂಬಂಧಿಸಿದ ಸುತ್ತೋಲೆ. ಜನವರಿ-2020ರ ವಾಣಿಜ್ಯ ಪರೀಕ್ಷೆಯ ಛಾಯಾಪ್ರತಿ ಹಾಗೂ ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಏಪ್ರಿಲ್ -2020ರ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಆಂತರಿಕ ಅಂಕಗಳ ನಮೂದು ದಿನಾಂಕ ವಿಸ್ತರಸಿರುವ ಬಗ್ಗೆ ಸುತ್ತೋಲೆ ಜನವರಿ-2020ರ ವಾಣಿಜ್ಯ ಪರೀಕ್ಷೆಯ ಛಾಯಾಪ್ರತಿ ಹಾಗೂ ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಮೇ-2020ರ ವಿಶೇಷ ಸಂಗೀತ,ನೃತ್ಯ ಹಾಗೂ ತಾಳವಾದ್ಯ ಪರೀಕ್ಷೆಯ ಆನ್ ಲೈನ್ ಅರ್ಜಿ ಜನವರಿ-2020ರ ವಾಣಿಜ್ಯ ಪರೀಕ್ಷೆಯ ಫಲಿತಾಂಶ ಫೆಬ್ರವರಿ-2020ರ ಅರೇಬಿಕ್ ಪರೀಕ್ಷೆಯ ಫಲಿತಾಂಶ ಏಪ್ರಿಲ್ -2020ರ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಆಂತರಿಕ ಅಂಕಗಳನ್ನು ಆನ್ ಲೈನ್ ನಲ್ಲಿ ನಮೂದು ಮಾಡುವ ಬಗ್ಗೆ ಆಕಾಶವಾಣಿಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷಾ ಸಿದ್ಧತೆ ಕಾರ್ಯಕ್ರಮ ಫೆಬ್ರವರಿ 2020 ರಾಜ್ಯ ಮಟ್ಟದ ಎಸ್.ಎಸ್.ಎಲ್.ಸಿ.ಪೂರ್ವಸಿದ್ಧತಾ ಪರೀಕ್ಷೆ ಕುರಿತು 2020ರ 7ನೇ ತರಗತಿ ಸಾಮಾನ್ಯ ಮೌಲ್ಯಾಂಕನದ ಪರಿಷ್ಕೃತ ವೇಳಾಪಟ್ಟಿ ಮಾರ್ಚಿ/ಏಪ್ರಿಲ್ 2020ರ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಅಂತಿಮ ಪ್ರವೇಶ ಪತ್ರಗಳ ಸುತ್ತೋಲೆ 2019-20ನೇ ಸಾಲಿನ 7ನೇ ತರಗತಿಯ ಸಾಮಾನ್ಯ ಮೌಲ್ಯಾಂಕನಕ್ಕೆ ಸಂಬಂಧಿಸಿದ ಸುತ್ತೋಲೆ 2019-20ನೇ ಸಾಲಿನ NTSE/NMMS ಪರೀಕ್ಷೆಗಳ ಫಲಿತಾಂಶಕ್ಕಾಗಿ DSERTಯನ್ನು ಸಂಪರ್ಕಿಸುವುದು (080-26980100)
ಕ್ರ.ಸಂ. ಪರೀಕ್ಷೆ ಸದ್ಯದ ಸ್ಥಿತಿ
1 ಎಸ್.ಎಸ್.ಎಲ್.ಸಿ. ಏಪ್ರಿಲ್ 2020ರ ಪರೀಕ್ಷೆಯ ಆಂತರಿಕ ಅಂಕಗಳ ನಮೂದು ಪ್ರಗತಿಯಲ್ಲಿದೆ.
2 ಕೆ.ಓ.ಎಸ್. ಮಾರ್ಚಿ 2020ರ ಪರೀಕ್ಷೆಗಳನ್ನು ಮುಂದೂಡಲಾಗಿದೆ.
3 ಡಿ.ಇ.ಎಲ್.ಇಡಿ ಜನವರಿ 2020ರ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿದೆ
4 ಡಿ.ಪಿ.ಇಡಿ. ಮೇ 2020ರ ಪರೀಕ್ಷಾ ಅಧಿಸೂಚನೆಯನ್ನು ಶೀಘ್ರವೇ ಹೊರಡಿಸಲಾಗುವುದು
5 ವಾಣಿಜ್ಯ ಜನವರಿ-2020 ಪರೀಕ್ಷಾ ಕರಡು ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಲಾಗಿದೆ.
6 ಸಂಗೀತ ಮೇ 2020ರ ಪರೀಕ್ಷಾ ಅಧಿಸೂಚನೆಯನ್ನು ಹೊರಡಿಸಲಾಗಿದೆ
7 ಗಣಕಯಂತ್ರ ಶಿಕ್ಷಣ ಫೆಬ್ರವರಿ 2020ರ ಪರೀಕ್ಷಾ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಲಾಗಿದೆ
8 ಚಿತ್ರಕಲೆ ನವೆಂಬರ್ 2019ರ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿದೆ
9 ಅರೇಬಿಕ್ ಫೆಬ್ರವರಿ 2020ರ ಪರೀಕ್ಷಾ ಅಧಿಸೂಚನೆಯನ್ನು ಹೊರಡಿಸಲಾಗಿದೆ
10 ಚಲನಚಿತ್ರ ನಟನೆ ಜೂನ್ 2019ರ ಪರೀಕ್ಷಾ ಫಲಿತಾಂಶ ಪ್ರಕಟಿಸಲಾಗಿದೆ
11 ರಂಗ ಶಿಕ್ಷಣ ಮೇ 2019ರ ಪರೀಕ್ಷಾ ಫಲಿತಾಂಶ ಪ್ರಕಟಿಸಲಾಗಿದೆ
12 ಎನ್.ಟಿ.ಎಸ್.ಇ. ಪರೀಕ್ಷೆ ಪೂರ್ಣಗೊಂಡಿರುತ್ತದೆ
13 ಎನ್.ಎಂ.ಎಂ.ಎಸ್. ಪರೀಕ್ಷೆ ಪೂರ್ಣಗೊಂಡಿರುತ್ತದೆ

1966 ರಲ್ಲಿ ಅಸ್ಥಿತ್ವಕ್ಕೆ ಬಂದಿರುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಸಂಯೋಜಿತ ಶಾಲೆಗಳ 10ನೇ ತರಗತಿಯ ಮುಖ್ಯ ಪರೀಕ್ಷೆಯನ್ನು ನೆಡೆಸುವುದರ ಜೊತೆಗೆ ಸಂಗೀತ, ಡಿ.ಎಡ್, ವಾಣಿಜ್ಯದಂತಹ ಇತರೆ 12 ಪರೀಕ್ಷೆಗಳನ್ನು ನಿರ್ವಹಿಸುತ್ತಿದೆ. ಬೆಂಗಳೂರಿನಲ್ಲಿ ಮಂಡಳಿಯ ಮುಖ್ಯ ಕಛೇರಿಯಿದ್ದು ಬೆಳಗಾಂ, ಕಲಬುರ್ಗಿ ಮತ್ತು ಮೈಸೂರುಗಳಲ್ಲಿ ವಿಭಾಗೀಯ ಕಛೇರಿಗಳಿವೆ, ಬೆಂಗಳೂರಿನ ಮಲ್ಲೇಶ್ವರಂನ ಮುಖ್ಯ ಕಛೇರಿಯಲ್ಲಿಯೇ ಬೆಂಗಳೂರು ವಿಭಾಗದ ಕಛೇರಿಯೂ ಇದೆ.

ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ಮಂಡಳಿಯ ವತಿಯಿಂದ ಜರುಗುವ 10ನೇ ತರಗತಿಯ ಪರೀಕ್ಷೆಗಳಿಗೆ ಸುಮಾರು 8.5 ಲಕ್ಷ ಮಕ್ಕಳು ಹಾಗೂ ಜೂನ್ ತಿಂಗಳಿನಲ್ಲಿ ನಡೆಯುವ ಪೂರಕ ಪರೀಕ್ಷೆಗಳಿಗೆ ಸುಮಾರು 2.2 ಲಕ್ಷ ಮಕ್ಕಳು ಹಾಜರಾಗುತ್ತಿದ್ದಾರೆ.

ನಿರ್ದೇಶಕರು (ಪರೀಕ್ಷೆಗಳು) ರವರು ಎಸ್.ಎಸ್.ಎಲ್.ಸಿ ಪರೀಕ್ಷೆಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಉಸ್ತುವಾರಿಯನ್ನು ನೋಡಿಕೊಂಡರೆ ಇತರೆ ಪರೀಕ್ಷೆಗಳ ನಿರ್ವಹಣೆಯನ್ನು ನಿರ್ದೇಶಕರು (ಇತರೆ ಪರೀಕ್ಷೆಗಳು) ನೋಡಿಕೊಳ್ಳುತ್ತಾರೆ.

ಮಂಡಳಿಯಲ್ಲಿ ಆಡಳಿತ ವಿಭಾಗ, ಲೆಕ್ಕಪತ್ರ ಶಾಖೆ,ಟೆಂಡರ್ ಗಳ ನಿರ್ವಹಣೆ, ಮೌಲ್ಯಮಾಪನ ಹಾಗೂ 34 ಜಿಲ್ಲೆಗಳಿಗಾಗಿ 09 ಪರಿಶೀಲನಾ ಶಾಖೆಗಳಿವೆ. ಗಣಕ ಶಾಖೆಯು ಪರೀಕ್ಷೆಗಳ ನಿರ್ವಹಣೆಯನ್ನು ಗಣಕೀಕೃತವಾಗಿ ನಿರ್ವಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.

2017-18 ನೇ ಸಾಲಿನಿಂದ ಮಂಡಳಿಯ ಪರೀಕ್ಷೆಗಳಿಗೆ ಸಂಬಂಧಿಸಿದ ಅನೇಕ ಚಟುವಟಿಕೆಗಳನ್ನು ಡಿಜಿಟಲೀಕರಿಸಲಾಗುತ್ತಿದೆ. ಪರೀಕ್ಷೆಗಳಿಗೆ ನೋಂದಣಿ, ಪ್ರವೇಶ ಪತ್ರಗಳ ವಿತರಣೆ ಮತ್ತು ಫಲಿತಾಂಶ ಪ್ರಕಟಣೆಯನ್ನು ಅಂತರ್ಜಾಲ ಆಧಾರಿತ ಸೇವೆಗಳನ್ನಾಗಿ ಪರಿವರ್ತಿಸಲಾಗಿದೆ. ಮೌಲ್ಯಮಾಪನ ಕೇಂದ್ರಗಳಿಂದ ಅಂಕಗಳನ್ನು ಸಹ ಅತ್ಯಾಧುನಿಕ ವಿಧಾನದಲ್ಲಿ ಅಂತರ್ಜಾಲದ ಮೂಲಕ ಮಂಡಳಿಗೆ ರವಾನಿಸಲಾಗುತ್ತಿದ್ದು ಫಲಿತಾಂಶ ಪ್ರಕಟಣೆಯನ್ನು ಕ್ಷಿಪ್ರಗತಿಯಲ್ಲಿ ನಿರ್ವಹಿಸಲು ಸಾಧ್ಯವಾಗಿದೆ. ವಿದ್ಯಾರ್ಥಿಗಳಿಗೆ ಎಸ್.ಎಂ.ಎಸ್ ಸಂದೇಶದ ಮೂಲಕ ಫಲಿತಾಂಶಗಳನ್ನು ನೀಡಲಾಗುತ್ತಿದೆ. ಡಿಜಿಲಾಕರ್ ಆಪ್ ಬಳಸಿ ಅಂಕಪಟ್ಟಿಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ.

ಕರ್ನಾಟಕ ಶಾಲಾ ಗುಣಮಟ್ಟ, ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ಮಂಡಳಿಯ ಪ್ರಮುಖ ವಿಭಾಗವಾಗಿದೆ. ಈ ವಿಭಾಗವು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ವಿಭಾಗಗಳ ಶಿಕ್ಷಣದ ಗುಣಮಟ್ಟವನ್ನು ವಾರ್ಷಿಕ ಸಮೀಕ್ಷಾ ಕಾರ್ಯಗಳ ಮೂಲಕ ನಿರ್ವಹಿಸುತ್ತಿದೆ.

ಹೆಚ್ಚಿನ ವಿವರಗಳಿಗೆ ಹಾಗೂ ಸೇವೆಗಳಿಗಾಗಿ ಮಂಡಳಿಯ ಜಾಲತಾಣವನ್ನು ಅವಲೋಕಿಸಬಹುದಾಗಿದೆ. ಸಂಪರ್ಕಿಸಬೇಕಾದ ವಿವರ ಮೆನು ಮೂಲಕ ತಮ್ಮ ಅಭಿಪ್ರಾಯಗಳನ್ನು ಸಂಬಂಧಿಸಿದ ಶಾಖೆಗಳಿಗೆ ಇ-ಮೇಲ್ ಮೂಲಕ ಕಳುಹಿಸಬಹುದಾಗಿದೆ.

Top| Designed & Developed by KSEEB Bangalore